Monday, January 4, 2010

South Karnataka trip ಪುರಾಣ (ಭಾಗ ೧ )

ಶುಕ್ರವಾರ ಮಧ್ಯಾನ ಆಫೀಸಿನಲ್ಲಿ ಕುಂತು ತೂಕಡಿಸ್ತಾ ಇದ್ದೆ, ಅದೆಲ್ಲಿಂದಲೋ ಬಂದ mail ಟಿಂಗ್ ಅಂತ ಶಬ್ದ ಮಾಡ್ತಾ ನನ್ನ ಗಮನ ಸೆಳೆಯಿತು. ಥೂ!! ಯಾರಿದು ಅಂತ ಬೈಕಂಡು ಓಪನ್ ಮಾಡಿ ನೋಡ್ತೀನಿ ಸದಾನಂದ ತೆಗ್ಗಿ "weekend" ಅಂತ ಸಬ್ಜೆಕ್ಟ್ ಹಾಕಿ ಮೇಲ್ ಮಾಡಿದ್ದ.. ಸ್ವಲ್ಪ ಮಂಪರಿನ ತೆರೆ ಸರಿದಂತಾಗಿ ಏನಿದು ಅಂತ ನೋಡಿದೆ, ಅದೊಂದು ವೀಕೆಂಡ್ ಟ್ರಿಪ್ invite ಆಗಿತ್ತು... ತಕ್ಷಣ reply ಗಳ ಸುರಿಮಳೆ... ಕೆಲವರು ಹ್ಞೂ ಅಂದ್ರು ಇನ್ನು ಕೆಲವರು ಇಲ್ಲ busy ಅಂದ್ರು.. ಅಂತು ಇಂತೂ 4 ಜನದ ಗುಂಪು ತಯಾರು ಆಗೆಬಿಟ್ಟಿತು.. ಎರಡು ದಿನದಲ್ಲಿ ಶೃಂಗೇರಿ ಮತ್ತೆ ಹೊರನಾಡು cover ಮಾಡೋ ಪ್ಲಾನ್ ಮಾಡಿದೆವು, ಅಷ್ಟರಲ್ಲಿ ಸಂತೋಷ "ಲೇ ಶಿಷ್ಯ ಬರಿ ತೀರ್ಥ ಯಾತ್ರೆ ಆಗುತ್ತಮ್ಮ ಸ್ವಲ್ಪ ಮಜನೂ ಮಾಡೋಣ, ಇನ್ನೊಂದು ಜಾಗ ಹೇಳ್ರೂ " ಅಂದ. ಅದಕ್ಕೆ ನಾನು ಸರಿ ಶಿವ ಒಂದು ದಿನದಲ್ಲಿ ತೀರ್ಥ ಯಾತ್ರೆ ಮುಗಿಸಿ ಭಾನ್ವಾರ ಜೋಗಕ್ಕೆ ಹೋಗ್ಬಿಡೋಣ ಅಂದೆ, ಎಲ್ಲರೂ ಬಹಳ exited ಆಗಿ ಸೂಪರ್ ಮಗ marvellous plan lets do it ಅಂದೆಬಿಟ್ಟರು.


ತುಂಬಾ ಹೊತ್ತು discussion ಆದಮೇಲೆ ಆದಷ್ಟು ದಾರಿಯನ್ನ ರಾತ್ರಿ ನೆ ಕ್ರಮಿಸಿಬಿಡೋಣ ಅಂತ decide ಮಾಡಿ ಶಿವಮೊಗ್ಗಕ್ಕೆ ಹೋಗುವ ರಾಜಹಂಸ ಹತ್ತಿ ಮಲಗಿಬಿಟ್ವಿ... ಇಲ್ಲಿ ಒಂದು ಮಜವಾದ ವಿಷಯ ಏನಂದ್ರೆ ನಾವುಗಳು ಹೊರಟಿದ್ದು ಉಡುಪಿ ಇಂದ, ನಮ್ಮ ಸೌತ್ ಕರ್ನಾಟಕ ಟ್ರಿಪ್ ಇಲ್ಲಿಂದ ಪ್ರಾರಂಭ.. :o)


ಮುಂಜಾನೆ 4 ಘಂಟೆಗೆ ಸರಿಯಾಗಿ ಶಿವಮೊಗ್ಗ ಲಿ ನಮ್ಮನ್ನ ಹೊತ್ತಾಕಿ ರಾಜಹಂಸ ದಾವಣಗೆರೆಯತ್ತ ಹಾರಿಹೋದ, ಅಷ್ಟು ಹೊತ್ತಿನಲ್ಲೂ ಶಿವಮೊಗ್ಗ ಬಸ್ ಸ್ಟ್ಯಾಂಡ್ ನಲ್ಲಿ ರಶ್!!! ಸರಿ ಇನ್ನು ಶೃಂಗೇರಿ ಬಸ್ ಹುಡುಕುವ ಕೆಲಸ. ಯಾರನ್ನ ತಡಕಿ ಕೇಳಿದರು ಎಲ್ಲರು ಒಂದು ಮೂಲೆಯನ್ನು ತೋರಿಸಿ ಅಲ್ಲಿ ನಿಲ್ಲಿ ಬರುತ್ತೆ ಅಂತ ಹೇಳುತ್ತಿದ್ದರು. ಶಿವಮೊಗ್ಗ ಬಸ್ ಸ್ಟ್ಯಾಂಡ್ ಮುಂದೆ ಇರುವ ಅಶೋಕ ಪಿಲ್ಲರ್ ಸುತ್ತ ನಾಲ್ಕು ಬಾರಿ ಸುತ್ತಿದ ಮೇಲೆ ಯಾರು ಸರೀಗೆ ಹೇಳ್ತಾ ಇಲ್ಲ ಅಂತ ನಮಗೆ ಅರಿವಾಗಿದ್ದು. ನಾನು ಬೆಂಗಳೂರಿಂದ ಬಂದಿದ್ದು ನೋಡಿ.. ಇಂಥವು ತುಂಬಾ ಅಭ್ಯಾಸ ಆಗಿದೆ, ಅಲ್ಲೇ ಹತ್ತಿರದಲ್ಲಿ ಇದ್ದ ಒಂದು ಚಾ ಗಾಡಿ ಹತ್ತಿರ ಹೋಗಿ ನಾಲ್ಕು ಚಾ ಹೇಳಿದೆ, ಬಿಸಿಬಿ ಬಿಸಿ ಚಾ ಕುಡಿಯುತ್ತ ಅಂಗಡಿಯ ಹುಡುಗನ್ನ "ಗುರು ಇಲ್ಲಿ ಶೃಂಗೇರಿ ಕಡೆ ಬಸ್ ಎಲ್ಲಿ ಬರುತ್ತಮ್ಮ ??" ಅಂದ ಕೂಡಲೇ ಪಟ ಪಟ ಅಂತ ಹೇಳ ತೊಡಗಿದ :o) ಅಲ್ಲೇ ಎದುರಿಗಿದ್ದ ಬಸ್ ಸ್ಟ್ಯಾಂಡ್ ಲಿ 4:45 ಗೆ ಮೊದಲ ಬಸ್.


ಶೃಂಗೇರಿ ಕಡೆ ಬಸ್ ಹೊರಟಂತೆ ಚಳಿ ಹೆಚ್ಚಿತು, ಹಿಮ ಎಲ್ಲೆಡೆ ಬೆಳ್ಳನೆಯ ಸೆರಗನ್ನು ಹೊಚ್ಚಿ ಇಡೀ ಜಗತ್ತನ್ನೇ ತನ್ನ ಮಡಿಲಿನಲ್ಲಿ ಮಳಗಿಸಿಕೊಂಡಂತೆ ಇತ್ತು. ನಮ್ಮ driver ಮಲಗದೆ ಇದ್ರೆ ಸಾಕು ಅನ್ನೋ ಭಯ ನು ಇತ್ತು ಬಿಡಿ, ಮಲೆನಾಡಿನ ಸೌಂದರ್ಯ ವನ್ನ ಸವಿಯುತ್ತ ಹಾಗೆ ನಿದ್ದೆ ಹೋದ್ವಿ.


ಎಷ್ಟು ಹೊತ್ತು ಮಲಗಿದವೋ ನೆನಪಿಲ್ಲ. ಇಡೀ journey ಕರೆಂಟ್ ಹೊಡೆದ ಕಾಗೆ ಥರ ಕುಳಿತಿದ್ದ ಅಭಿಲಾಷ ಯಾಕೋ ಕಿಟಾರ್!!! ಎಂದು ಕೂಗಿದಂತೆ ಅನ್ನಿಸಿತು, ಎಲ್ಲರು ಎದ್ದು ನೋಡುತ್ತೇವೆ ಅವನ ಮುಖದಲ್ಲಿ ಒಂದು ರೀತಿಯ ಶಾಕ್ ಇತ್ತು. ಕಿಟಿಕಿಯತ್ತ ಕೈ ಮಾಡಿ "just look at this dude" ಅಂದನು... ಅವನ ಕೈ ಒಂದು ಹಸಿರು ಬೋರ್ಡ್ ಕಡೆ ತಿರುಗಿತ್ತು, ಅದರ ಮೇಲೆ ಬೆಳ್ಳಗೆ ಫಳ ಫಳ ಹೊಳೆಯುವ radium sticker ಲಿ "MANGALORE 105 KMS" ಅಲ್ಲಿಂದ ಶೃಂಗೇರಿ ಮುಟ್ಟುವ ವರೆಗೂ ನಿದ್ದೆ ಬರಲಿಲ್ಲ. ನಾವು ಶೃಂಗೇರಿ ಲೇ ಇದ್ದ್ವಿ ಅನ್ನೋದು ಬೇರೆ ಮಾತು.


ಹೌದು ಅಭಿ ಯಾಕೆ ಸುಮ್ನಿದ್ದ ಅಂತ ಹೇಳೋದು ಮರೆತೆ. ಅವನು ಕೇರಳ ದವನಾದ್ದರಿಂದ ಅವನಿಗೆ ಕನ್ನಡ ಅರ್ಥ ವಾದರೂ ಮಾತಾಡೋದು ಸ್ವಲ್ಪ ಕಷ್ಟ ಆಗ್ತಾ ಇತ್ತು. ಜೋಗಕ್ಕೆ ಹೋಗೋ ಬಸ್ ನಲ್ಲಿ ಹುಡುಗೀರು ಹತ್ತಿದಕ್ಷಣ ಮಾತಾಡೋಕ್ಕೆ ಶುರು ಮಾಡಿದ.


ಶೃಂಗೇರಿಲೇ ಒಂದು ರೂಂ ಮಾಡಿ.. ಮೊದಲು ಶಾರದ ದೇವಿ ದರ್ಶನ ಮಾಡಿ ಹೊರನಾಡಿಗೆ ಹೋಗ್ಬಂದ್ವಿ.. ರಾತ್ರಿ ಎಲ್ರು ಮೊಬೈಲ್ ಲಿ 4 ಘಂಟೆ ಗೆ alarm ಇಟ್ಟು... ತೆಗ್ಗಿ ಗೆ ಎಲ್ರುನ್ನು ಎಬ್ಬಿಸೋ responsibility ಹೊರಿಸಿದ್ವಿ...


ಬರಲಿದೆ ಭಾಗ ..

5 comments:

Chandan Shetty said...

Coolest part is "ಅಭಿಲಾಷ ಯಾಕೋ ಕಿಟಾರ್!!! ಎಂದು ಕೂಗಿದಂತೆ ಅನ್ನಿಸಿತು" :-)

Unknown said...

ತುಂಬ ಚೆನ್ನಾಗಿ ಬರ್ದಿದ್ಯ ಕಣೋ. Keep it up.

Abhilash Perayil said...

Dude, Quoted line "MANGALORE 105 KMS" is good enough for me to apprehend article gist :)

Unknown said...

Nice post lol…

Sadanand said...

marvellous plan lets do it ಅಂದೆಬಿಟ್ಟರು Later we came to know Dabba plan, Baddi magane 3Hrs distance na 12Hrs journey maadbitti alo katte.

"ಕೆಲವರು ಹ್ಞೂ ಅಂದ್ರು ಇನ್ನು ಕೆಲವರು ಇಲ್ಲ busy ಅಂದ್ರು"
Innu kelvaru Tappu tilkondru ha ha just kidding guys don't be serious, Magane mutthala chandu ninge kano le. now no comments on this plz.

ಜೋಗಕ್ಕೆ ಹೋಗೋ ಬಸ್ ನಲ್ಲಿ ಹುಡುಗೀರು ಹತ್ತಿದಕ್ಷಣ ಮಾತಾಡೋಕ್ಕೆ ಶುರು ಮಾಡಿದ Paapa Abhi avaglu sumne kootidda, magane yaak sumne heltiya??