ನಮ್ಮ ಭಾರತ ದೇಶ ಪ್ರಕಾಶಿಸುತ್ತಿದೆ ಎಂದು ಯಾರು ಎಷ್ಟು ಆರ್ಭಟ ಮಾಡಿದರೂ, ಪ್ರತಿ ದಿನ ವಿದ್ಯುತ್ ಕಡಿತ ದಿಂದಾಗಿ ಬೀಸಣಿಗೆಯಲ್ಲಿ ಗಾಳಿ ಬೀಸಿಕೊಂಡು, ಮೊಂಬತ್ತಿಯ ಬೆಳಕಿನಲ್ಲಿ homework ಮಾಡಿಕೊಂಡು, ಒಂದು ಬಿಂದಿಗೆ ನೀರಿಗಾಗಿ ಪರದಾಡುತ್ತ ಮಾತು ಮಾತಿಗೂ ತಮ್ಮ ಹಣೆಬರಹವನ್ನು ತೆಗಳಿಕೊಳ್ಳುತ್ತಾ ಕಾಲ ನಡೆಸುತ್ತಿರುವ ಸಾಮಾನ್ಯ ನಾಗರಿಕನಿಗೆ ಅದು ಸುಳ್ಳು ಎಂದು ಗೊತ್ತು. ಎಲ್ಲಿ ನೋಡಿದರಲ್ಲಿ ಗೋಮುಖ ವ್ಯಾಘ್ರಗಳೇ ತುಂಬಿಕೊಂಡಿರುವ ಈ ಕಾಲದಲ್ಲಿ ಯಾರನ್ನು ಚುನಾಯಿಸುವುದು?? ಯಾವ ಅಭ್ಯರ್ಥಿ ನಮ್ಮ ಕಷ್ಟಗಳನ್ನು ನೀಗಿಸಲು ಸಮರ್ಥ?? ಸಮರ್ಥ ಅಭ್ಯರ್ಥಿ ಇದ್ದರೂ ಅವನಿಗೆ ಗೆಲುವು ಖಚಿತವೆ?? ಒಂದು ವೇಳೆ ಅವನು ಗೆದ್ದನು ಎಂದೇ ಇಟ್ಟುಕೊಳ್ಳೋಣ, ಅವನು ಆಮಿಷಗಳಿಗೆ ಒಳಗಾಗದೆ ತನ್ನನ್ನು ಗದ್ದುಗೆಗೆ ತಂದ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳನ್ನೂ ನೀಗುವನೆ?? ಅವನ ಸಹಚರರು ಇಂಥ ಪಥದಲ್ಲಿ ನಡಿಯಲು ಅವನಿಗೆ ಆಸ್ಪದ ನೀಡುವರೆ?? ಈ ಪ್ರಶ್ನೆಗಳನ್ನ್ನನಾನು ಕೇಳುತ್ತಿಲ್ಲ.. ಇಂದಿನ ಸಮಾಜವೇ ಈ ಪ್ರಶ್ನೆಗಳನ್ನು ಪ್ರಸ್ತಾಪಿಸುತ್ತಿದೆ.
ತಾವು ಚುನಾಯಿಸಿದ ಪ್ರತಿನಿಧಿಗಳು ಅವರ ಸ್ವಾರ್ಥಕ್ಕೋಸ್ಕರ ನಾಡಿನ ಏಳಿಗೆಯನ್ನು ಬಲಿಪಶು ಮಾಡುತ್ತಿರುವುದನ್ನು ಕಂಡು ಕಾಣದಂತೆ ಕೂಡಬೇಕಾದ ವಿಡಂಬನೆ ಇಂದಿನ ಜಾಗೃತ ನಾಗರೀಕನದು. ದೇಶ ಇಂದೇನಾದರೂ ಸಾಧಿಸುತ್ತಿಧೆ ಎಂದಾದರೆ ಅದು ಭಾರತ ದೇಶದ ಸಾಮಾನ್ಯ ಮನುಷ್ಯನಿಂದ ಮಾತ್ರ. ನಾಡಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿರುವ ಅನಕ್ಷರಸ್ಥ ಜನತೆಯ ಅಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪೂಂಜಿಪತಿಗಳಿಗೆ ಲಗಾಮು ಹಾಕುವ ಕೆಲಸವನ್ನು ಈ ಅಸಾಮಾನ್ಯನಾದ ಸಾಮಾನ್ಯ ಮಾಡಬೇಕಿದೆ. ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಿದರೆ, ಅರಸರ ಕಾರಣದಿಂದ ಆರ್ಥಿಕ ಮತ್ತು ಸಾಮಾಜಿಕ ದುರ್ಗತಿಯಲ್ಲಿದ್ದ ಯಾವುದೇ ದೇಶದ ಏಳ್ಗೆಯಾಗಲಿ ಅದು ಸರ್ವೇಸಾಮಾನ್ಯ ನಾಗರಿಕ ಆ ದೇಶದ ಅರಸರ ವಿರುದ್ಧ ದಂಗೆ ಎದ್ದಾಗ ಮಾತ್ರ ಸಾಧ್ಯವಾಗಿದೆ.
ನಮ್ಮ ಭಾರತ ದೇಶವನ್ನು ಪ್ರಗತಿ ಪಥದಲ್ಲಿ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಬೇಕಾದ so called "YOUNGISTAN" ಆದ ನಾವು ದೇಶದ ಆಡಳಿತವನ್ನು ಶುಚಿ ಗೊಳಿಸಲು ಮಾಡಬಹುದಾದಂತಹ ಕಾರ್ಯವಾದರು ಏನು ಎಂದು ಒಮ್ಮೆ ಯೋಚಿಸುತ್ತಿದ್ದಾಗ ನನ್ನ ಮನಸಿನಲ್ಲಿ ಮೂಡಿದಂತಹ ಒಂದು ಚಿಂತನೆಯನ್ನು ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ.
ಬರಲಿದೆ ಭಾಗ ೨...
2 comments:
Good one. Need 2 curb d corruption, terrorists, rebels, Oh my god whatz happening here :-(. Please Youngistan its ur turn to save this mother land.
ಒಳ್ಳೆಯ ಪ್ರಯತ್ನ , ನೀನು ಹೇಳಿದ್ದೆಲ್ಲ ನೂರಕ್ಕೆ ನೂರರಷ್ಟು ಸತ್ಯ , ಮುಂದಿನ ಭಾಗವನ್ನು ಓದುವದಕ್ಕೆ ಕಾಯ್ತಿದೀನಿ
Post a Comment