ಬೆಳ್ಳಂ ಬೆಳಿಗ್ಗೆ ನಾಲ್ಕು ಜನರ ಮೊಬೈಲ್ಗಳು ಕೂಗಿಕೊಂಡ್ವು. ಎಲ್ರು ದಡ ಬಡ ಎದ್ದು ಬಚ್ಚಲು ಮನೆಗೆ ಹೋಗಿ ನೋಡ್ತಿವಿ ನಲ್ಲಿಯಲ್ಲಿ ಮೈ ಕೊರೆಯುವಂಥ ತಣ್ಣೀರು. ಓಡಿ ಹೋಗಿ lodge ಮಾಲಿಕನ್ನ ಎಬ್ಸಿದ್ವಿ, 5 :30 ಇಂದ ಬಿಸಿ ನೀರು ಅಂತ ಹೇಳಿ ಮಲಗಿಯೇಬಿಟ್ಟ.. ಪಾಪ ಅಭಿ ಕೊರೆಯುವ ಚಳಿಯಲ್ಲಿ ಹಾಗೆ ಸ್ನಾನ ಮಾಡಿ ಬಂದ.. ನಾನು ಒಳಗೆ ಹೋಗಿ ಒಂದು bucket ತಣ್ಣೀರು ಖಾಲಿ ಮಾಡಿ ಮತ್ತೆ ನಲ್ಲಿ ಬಿಟ್ಟಾಗ ಬಿಸಿ ಬಿಸಿ ನೀರು, "ಲೋ ಮಕ್ಳ ಬಿಸಿ ನೇರು ಕಣ್ರೋ" ಅಂತ ಕೂಗಿ ಹೇಳಿದೆ, ಎಲ್ಲರಿಗು ಸಂಭ್ರಮವೂ ಸಂಭ್ರಮ. 5 :30 ಎಲ್ರು ರೆಡಿ ಆಗಿ ಚಾ ಕುಡಿದು ತೀರ್ಥಹಳ್ಳಿ ಬಸ್ ಹತ್ತಿ ಕುಂತ್ವಿ.
ಬೆಚ್ಚಗೆ ಇದ್ದ seat ನಲ್ಲಿ ಕುಳಿತು ಎಲ್ಲರು ನಮ್ಮ earphone ಗಳನ್ನ ಕಿವಿಗೆ ಏರಿಸಿದ್ವಿ. ಅಷ್ಟೊತ್ತು ಮಲಗಿದ್ದ ಸೂರ್ಯ ನಿಧಾನಕ್ಕೆ ತನ್ನ ಕೆಂಪು ಕಣ್ಣನ್ನು (ರಾತ್ರಿ ಹೊಡೆದ ಎಣ್ಣೆ ಜಾಸ್ತಿ ಆಗಿತ್ತೇನೋ ..) ತೆರೆಯುತ್ತ ಎದ್ದೆಳತೊಡಗಿದ , ಮಲೆನಾಡಿನ ಸೂರ್ಯೋದಯದ ಸೌಂದರ್ಯವನ್ನ ನೋಡಿದರೆ ನಮ್ಮ ಕುವೆಂಪು ಏನು ಯಾರು ಬೇಕಾದರು ಕವಿಗಳಗ್ತಾರೆ. ಮೌಡ್ಯತೆಯ ಕತ್ತಲನ್ನು ಚೀರಿ, ಜಾಡ್ಯ ಎಂಬ ಮಂಜನ್ನು ನೀರಾಗಿಸಿ, ಹೊಸ ಭರವಸೆ, ಆಸೆಗಳೆಂಬ ಹಕ್ಕಿಗಳನ್ನು ಎಲ್ಲರ ಮನಗಳಲ್ಲಿ ಹಾರಿಸುತ್ತ ಇನ ಬಾಂದಳದಲ್ಲಿ ಮೇಲೆರಿದನು.
ಇಂಪಾದ ಹಕ್ಕಿಗಳ ಗಾನವನ್ನು ಕೇಳುತ್ತ ನಾನು ಹಾಗೆ ನಿದ್ರಾ ದೇವಿಯ ಮಡಿಲಿಗೆ ಜಾರಿಬಿಟ್ಟೆ. ಎದ್ದಿದ್ದು ತೀರ್ಥಹಳ್ಳಿಯಲ್ಲಿ. ಸುತ್ತ ನೋಡ್ತಿನಿ, ಮಲೆನಾಡಿನ ಎಲ್ಲ ಹಕ್ಕಿಗಳು ನಮ್ಮ ಬಸ್ ನಲ್ಲೆ ಇದ್ವು, ಹಳದಿ ಚೂಡಿದಾರ ಧರಿಸಿದ್ದ ಒಂದ್ ಹಕ್ಕಿಯಂತು ಮನ ಮೋಹಕವಾಗಿತ್ತು. ನನ್ನ ಮಿತ್ರದ್ರೋಹಿ ಸ್ನೇಹಿತರು ನನ್ನು ಎಬ್ಬಿಸದೆ ಅವರೇ ಮಜಾ ಮಾಡಿದ್ದರು :o( ಅವೆಲ್ಲ ಇವಾಗ ಯಾಕೆ ಬಿಡಿ. ಅಲ್ಲಿಂದ ಸಾಗರಕ್ಕೆ ಹೋಗಿ ತಿಂಡಿ ಮುಗಿಸಿ ಜೋಗಕ್ಕೆ ಬಸ್ ಹತ್ತಿದಾಗ ಸಮಯ 11:45 .
ಜಗತ್ಪ್ರಸಿದ್ಧ ಜೋಗ ಜಲಪಾತ, ರಾಜ, ರಾಣಿ ಮತ್ತು ರೊಕೆಟ್ ಕುಯ್ಯೋ ಮರ್ರೋ ಅಂತ ಇದ್ರು. ಟೆನ್ಶನ್ ತಗೋಬೇಡಿ, ನನ್ನ ಮಾತಿನ ಅರ್ಥ ನೀರು ಹೆಚ್ಗೆ ಇರಲಿಲ್ಲ ರೋರೆರ್ ಒಬ್ಬ ಮತ್ರ ರಾರಾಜಿಸ್ತ ಇದ್ದ. ನೀರು ಹೆಚ್ಗೆ ಇಲ್ಲದ್ದರಿಂದ ನಮಗೆ ನೀರಲ್ಲಿ ಆಟ ಆಡೋ ಹಂಬಲ ಆಗಿ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ. ಯಾತ್ರಿಕರಿಗೆ ಸಹಾಯ ಆಗ್ಲಿ ಅಂತ concrete ಮೆಟ್ಟಿಲುಗಳನ್ನ ಮಾಡಿದೆ ಸರಕಾರ, ಆದರೆ ಮುಂಚಿನ ಕಾಲು ದಾರಿಯಲ್ಲಿ ನಡಿಯೋ ಮಜಾ ಈಗ ಇಲ್ಲ. ತಮ್ಮ ಸೌಂದರ್ಯವನ್ನು ಸವಿಲು ಬಂದ ರಸಿಕರ ಜೊತೆ ರಾಜ, ರಾಣಿ, ರೋರೆರ್ ಮತ್ತು ರೊಕೆಟ್ ಮರಗಳ ನಡುವೆ ಅವಿತು ಆಡುತಿದ್ದ ಕಣ್ಣ ಮುಚ್ಚಾಲೆ ಈಗ ಇಲ್ಲ. ಎಲ್ಲಿ ನೋಡಿದರು ಪ್ಲಾಸ್ಟಿಕ್ ಹಾವಳಿ. Will we never change ??
ಎಲ್ಲರು ಕೆಳಗೆ ಇಳಿದು ನಮ್ಮ ಚೀಲಗಳನ್ನ ಒಂದು ಬಂಡೆಯ ಮೇಲೆ ಗುಡ್ಡೆ ಹಾಕಿ ನೀರಿಗೆ ಧುಮುಕಿದೆವು. ಈಜು ಬಾರದೆ ಇದ್ದರೆ ಜೋಗದಲ್ಲಿ ಜಾಸ್ತಿ risk ತೆಗೆದುಕೊಳ್ಳಬಾರದು. ಎಲ್ಲ ಬಂಡೆಗಳು ಪಾಚಿ ಕಟ್ಟಿ ತುಂಬಾ ಜಾರಿಕೆ, ಅದು ಅಲ್ಲದೆ sudden ಆಗಿ ಆಳ ಇರೋದ್ರಿಂದ ಬಂಡೆಗಳಿಗೆ ಒರಗಿಕೊಂಡೆ ಆಟ ಆಡಿ ವಾಪಾಸ್ ಬರಬೇಕಾಯಿತು. ಹಿಂದಿರುಗುವಾಗ 1700 odd ಮೆಟ್ಟಿಲುಗಳನ್ನ ಹತ್ತುವುದೇ ಒಂದು ದೊಡ್ಡ ಸಾಹಸ. ನನ್ನ ಕಾಲುಗಳು ನನ್ನ ಭಾರದ ಜೊತೆಗೆ ನನ್ನ ಬ್ಯಾಗ್ ಭಾರವನ್ನು ಹೊರಲಾರದೆ ಸೋತು ಹೋದವು. ಕೊನೆಗೆ ಅಭಿ ನನ್ನ ಬ್ಯಾಗ್ ಹೊತ್ತುಕೊಂಡು ಬಂದ (Thanx abhi). ಅಂತು ಇಂತೂ ಮೇಲೆ ಬಂದು ಸಾಗರಕ್ಕೆ ವಾಪಾಸ್ ಆದೆವು. ಅಲ್ಲಿಂದ ರಾತ್ರಿ ಎಂಟಕ್ಕೆ ಬಸ್ ಹಿಡಿದು ಉಡುಪಿ ಗೆ ಬಂದು ತಲುಪುವಾಗ ರಾತ್ರಿ 1 ಘಂಟೆ ಆಗಿತ್ತು. ಜನವರಿ ಯಲ್ಲಿ ಮತ್ತೊಂದು ಟ್ರಿಪ್ ಹೋಗೋಣವೆಂದು ಮೆಸೇಜ್ ಮಾಡಿ ಎಲ್ಲರು ಮಲಗಿದೆವು.
4 comments:
Nice post dude!!! ninna baravanige chennagide, really nice dude.
And ...
Enu profile dalli bhari photo haakidiya? Bussnalli seat pakka hudgirna patayisiddu saakaglilvo?innu photo nodi eshta jana hinde biltaro?
@"ಮಲೆನಾಡಿನ ಸೂರ್ಯೋದಯದ ಸೌಂದರ್ಯವನ್ನ ನೋಡಿದರೆ ನಮ್ಮ ಕುವೆಂಪು ಏನು ಯಾರು ಬೇಕಾದರು ಕವಿಗಳಗ್ತಾರೆ. ಮೌಡ್ಯತೆಯ ಕತ್ತಲನ್ನು ಚೀರಿ, ಜಾಡ್ಯ ಎಂಬ ಮಂಜನ್ನು ನೀರಾಗಿಸಿ, ಹೊಸ ಭರವಸೆ, ಆಸೆಗಳೆಂಬ ಹಕ್ಕಿಗಳನ್ನು ಎಲ್ಲರ ಮನಗಳಲ್ಲಿ ಹಾರಿಸುತ್ತ ಇನ ಬಾಂದಳದಲ್ಲಿ ಮೇಲೆರಿದನು."
Wo man, you have great future as a writer . . .
Lo magane, you have removed a comment, what was it ???
oyee dummaa.. superr kanoo.. ಮೌಡ್ಯತೆಯ ಕತ್ತಲನ್ನು ಚೀರಿ, ಜಾಡ್ಯ ಎಂಬ ಮಂಜನ್ನು ನೀರಾಗಿಸಿ, ಹೊಸ ಭರವಸೆ, ಆಸೆಗಳೆಂಬ ಹಕ್ಕಿಗಳನ್ನು ಎಲ್ಲರ ಮನಗಳಲ್ಲಿ ಹಾರಿಸುತ್ತ ಇನ ಬಾಂದಳದಲ್ಲಿ ಮೇಲೆರಿದನು."
idu ultii ide .. super duperr my darlin baby brother :)
Post a Comment