ಹೇಳಿ ಹೋಗು ಕಾರಣ, ಹೋಗುವ ಮೊದಲು...
C.ಅಶ್ವಥ್
29 december 1939 - 29 december 2009
C . ಅಶ್ವಥ್ ಅವರನ್ನು ಕನ್ನಡ ಸುಗಮ ಸಂಗೀತದ ಮೇರು ಪರ್ವತ ಎಂದು ಕರೆದರೂ ತಪ್ಪು ಆಗಲಾರದು.. ಅಂತಹ ಒಂದು ಮಹಾನ್ ಚೇತನವನ್ನು ಕಳೆದುಕೊಂಡು ಇಂದು ನಮಗೆ ಭರಿಸಲಾಗದಂತಹ ನಷ್ಟವಾಗಿದೆ.. ಕನ್ನಡದ ಮಹಾನ್ ಕವಿಗಳ ಕಾವ್ಯಗಳಿಗೆ ರಾಗದ ರೂಪದಲ್ಲಿ ಜೀವತುಂಬಿ ಎಲ್ಲರ ಮನಮುಟ್ಟುವಂತೆ ಹಾಡುವಂಥ ಇವರ ಶೈಲಿ ಬಹಳ ಅನುಪಮ ಹಾಗು ಅಪೂರ್ವ.. ಅವರ ದೇಹ ಇಂದು ನಮ್ಮ ಮಧ್ಯ ಇಲ್ಲದಿದ್ದರೂ ಅವರು ತಮ್ಮ ಹಾಡುಗಳ ಮೂಲಕ ಕನ್ನಡ ಅಭಿಮಾನಿಗಳ ಎದೆಯಲ್ಲಿ ಚಿರಂತನವಾಗಿ ಉಳಿಯುತ್ತಾರೆ..